          ಮೂಲದೊಡನೆ ಪರಿಶೀಲಿಸಿ

ಕಾರ್ನೊಟೈಟ್

 ಜಲಾಂಶದಿಂದ ಕೂಡಿದ ಪೊಟ್ಯಾಸಿಯಂ, ಯುರೇನಿಯಂ, ಆಕ್ಸಿಜನ್ನುಗಳನ್ನು ಒಳಗೊಂಡಿರುವ ಖನಿಜ. ರಾಸಾಯನಿಕ ಸೂತ್ರ ಏ2(Uಔ2)2 (ಗಿಔ4)2.ಟಿಊ2ಔ. ಇದರಲ್ಲಿ 62% ಯುರೇನಿಯಂ ಆಕ್ಸೈಡ್ ಇದೆ. ನಿಂಬೆ ಹಳದಿ ಅಥವಾ ಹಸುರು ಮಿಶ್ರವಾದ   ಹಳದಿ ಬಣ್ಣದ, ಮಣ್ಣು ಅಥವಾ ಮುತ್ತಿನ ಹೊಳಪುಳ್ಳ ಈ ಖನಿಜ ಮಾನೋಕ್ಲಿನಿಕ್ ಗಣದ ಹರಳುಗಳಾಗಿ ರೂಪುಗೊಳ್ಳುತ್ತದೆ. ಅವ್ಯವಸ್ಥಿತ ಅಥವಾ ಸೂಕ್ಷ್ಮ ಹರಳುಗುಚ್ಛಗಳ ಸ್ವರೂಪದಲ್ಲಿರಬಹುದು. ಇದರ ಸಾಪೇಕ್ಷ ಸಾಂದ್ರತೆ 4.7. ಅಂತರ್ಜಲ ಸಂಪರ್ಕದಿಂದ ರೂಪಾಂತರಗೊಂಡ ಯುರೇನಿಯಂ ಮತ್ತು ವೆನೆಡಿಯಂಗಳ ಮೂಲ ಅದುರುಗಳೇ ಕಾರ್ನೊಟೈಟಿನ ಉತ್ಪತ್ತಿಗೆ ಕಾರಣವೆಂದು ಪರಿಗಣಿಸಲಾಗಿದೆ. ದಕ್ಷಿಣ ಆಸ್ಟ್ರೇಲಿಯಾದ ರೇಡಿಯಂ ಹಿಲ್ ಪ್ರದೇಶದಲ್ಲಿ ಮೂಲಖನಿಜವಾದ ಡೆವಿಟೈಟಿನ ರೂಪಾಂತರದಿಂದ ಕಾರ್ನೊಟೈಟ್ ಉತ್ಪನ್ನವಾಗಿದೆ.

 ಅಮೆರಿಕದ ಕಾಲೊರಡೋ ಪ್ರಸ್ಥಭೂಮಿಯ ಜ್ಯುರಾಸಿಕ್ ಮತ್ತು ಟ್ರಯಾಸಿಕ್ ವೈಯೋಮಿಂಗ್ ರಾಜ್ಯದ ಪಂಪ್‍ಕಿನ್ ಬ್ಯೂಟ್ಸ್ ಪ್ರದೇಶದ ಇಯೋಸೀನ್ ಮತ್ತು ಅಲಿಗೋಸೀನ್ ಯುಗಗಳ ಮರಳುಶಿಲೆಗಳಲ್ಲಿ ಸಸ್ಯಾವಶೇಷಗಳ ಜೊತೆಯಲ್ಲಿ ಕಾರ್ನೊಟೈಟ್ ಹೇರಳವಾಗಿ ದೊರೆಯುತ್ತದೆ.       

 (ಸಿ.ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ